ಎಳ್ಳು ಬೆಲ್ಲ ಚಿಕ್ಕಿ

ಮಕರ ಸಂಕ್ರಾಂತಿ ಸ್ಪೆಷಲ್ ಬಿಳಿ ಅಥವಾ ಕಪ್ಪು ಎಳ್ಳು ಚಿಕ್ಕಿ ಮಾಡುವ ವಿಧಾನ...
ಬಿಳಿ ಎಳ್ಳು ಚಿಕ್ಕಿ
ಬಿಳಿ ಎಳ್ಳು ಚಿಕ್ಕಿ
ಬೇಕಾಗುವ ಪದಾರ್ಥಗಳು
1 ಬಟ್ಟಲು ಕಪ್ಪು ಅಥವಾ ಬಿಳಿ ಎಳ್ಳು
1 ಬಟ್ಟಲು ಪುಡಿ ಮಾಡಿದ ಬೆಲ್ಲ
ಸ್ವಲ್ಪ ತುಪ್ಪ
ಸ್ವಲ್ಪ ನೀರು 
ಮಾಡುವ ವಿಧಾನ:
  • ಬಿಳಿ ಅಥವಾ ಕಪ್ಪು ಎಳ್ಳನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. 
  • ನಂತರ ಅದನ್ನು ತೆಗೆದು ಬಾಣಲೆಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಅದಕ್ಕೆ ಬೆಲ್ಲ ಹಾಕಿ ಕರಗಿಸಿಕೊಳ್ಳಿ. ಬೆಲ್ಲ ನೊರೆ ಬರುತ್ತಿರುವಾಗ ಪಾಕ ಹದವಾಗಿದೆಯೇ ಎಂದು ನೋಡಲು ಸಣ್ಣ ಬೌಲ್ ನಲ್ಲಿ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಕೈಯಲ್ಲಿ ಮುಟ್ಟಿದಾಗ ಕೈಗೆ ಬೆಲ್ಲ ಉಂಡೆಯ ಆಕಾರದಲ್ಲಿ ಬಂದರೆ ಚೆನ್ನಾಗಿ ಹದವಾಗಿದೆಯೆಂದು ಅರ್ಥ. ಆಗ ಹುರಿದಿಟ್ಟುಕೊಂಡ ಎಳ್ಳನ್ನು ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಉಂಡೆ ಕಟ್ಟದಂತೆ ಸೌಟಿನಿಂದ ಕೈಯಾಡಿಸಿ.
  • ಪಾಕ ಗಟ್ಟಿಯಾದಾಗ ಅದನ್ನು ತುಪ್ಪ ಅಥವಾ ಎಣ್ಣೆ ಸವರಿದ ತಟ್ಟೆಗೆ ಹಾಕಿ ತೆಳುವಾಗಿ ಹರಡಿಕೊಳ್ಳಿ. ನಂತರ ಅದು ಸುಮಾರು ಬಿಸಿಯಿರುವಾಗಲೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಎಳ್ಳು ಉಂಡೆ ಬೇಕೆಂದರೆ ಇದನ್ನೇ ಪಾಕ ಬಿಸಿಯಾಗಿರುವಾಗ ಉಂಡೆ ಕಟ್ಟಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com